Posts

Showing posts from April, 2011

ಮಾಡಲಾರದ ಕೆಲಸ - ೨

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದು
ಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;
ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದು
ಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!

ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂದ)

ಪ್ರಸಹ್ಯ ಮಣಿಂ ಉದ್ಧರೇತ್ ಮಕರ ವಕ್ತ್ರದಂಷ್ಟ್ರಾಂತರಾತ್
ಸಮುದ್ರಮಪಿ ಸಂತರೇತ್ ಪ್ರಚಲದೂರ್ಮಿ ಮಾಲಾಂಕುಲಾಮ್|
ಭುಜಂಗಮಪಿ ಕೋಪಿತಂ ಶಿರಸಿ ಪುಷ್ಪವತ್ ಧಾರಯೇನ್ನತು
ಪ್ರತಿವಿಷ್ಟ ಮೂರ್ಖಜನ ಚಿತ್ತಮಾರಾಧಯೇತ್ ||

-ಹಂಸಾನಂದಿ

ಕಾಯ ಮರೆತಳಯ್ಯ ಮರುಳಿಗೆ ವಶವಾಗಿ!

Image
’ಆಡ ಹೋದ ಕೃಷ್ಣ ಈಗ ಮಣ್ಣು ತಿಂದನಮ್ಮ’! ’ಕೃಷ್ಣ, ಇದು ನಿಜವೇನು’?
’ಹೇಳಿದ್ಯಾರು’? ’ಇವನೇ, ಬಲರಾಮ’ ’ಬರೀ ಸುಳ್ಳು, ನೋಡು ಬಾಯಲಿ ’
ಎನ್ನುತಾವ ಮಗು ಬಾಯ ತೆರೆದಿರಲು ತಾಯಿ ಕಂಡು ಮೂರೂ ಜಗವನು
ಮೈಯನೇ ಮರೆತು ತಾ ತೇಲಿ ಹೋದಳೋ ಆ ಕೇಶವನು ನಮ್ಮ ಕಾಯಲಿ

ಸಂಸ್ಕೃತ ಮೂಲ: (ಲೀಲಾಶುಕನ ಕೃಷ್ಣ ಕರ್ಣಾಮೃತದಿಂದ)

ಕೃಷ್ಣೇನಾಂಬ ಗತೇನ ರಂತುಮಧುನಾ ಮೃದ್ಭಕ್ಷಿತಾ ಸ್ವೇಚ್ಛಯಾ
ತಥ್ಯಂ ಕೃಷ್ಣ ಕ ಏವಮಾಹ ಮುಸಲೀ ಮಿಥ್ಯಾಂಬ ಪಶ್ಯಾನನಮ್ |
ವಾದೇಹೀತಿ ವಿದಾರಿತೇ ಶಿಶುಮುಖೇ ದೃಷ್ಟ್ವಾ ಸಮಸ್ತಂ ಜಗ-
ನ್ಮಾತಾ ಯಸ್ಯ ಜಗಾಮ ವಿಸ್ಮಯಪದಂ ಪಾಯಾತ್ಸ ನಃ ಕೇಶವಃ ||

-ಹಂಸಾನಂದಿ

ಕೊ:
ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗ
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ

ಪುರಂದರ ದಾಸರ "ಕಂದಾ ಬೇಡವೊ ಮಣ್ಣಾಟ ಬೇಡವೋ" ಎನ್ನುವ ಪದದ , ಈ ಮೇಲಿನ ಚರಣವೊಂದರ ಸಾಲಿನಿಂದ ತಲೆಬರಹವನ್ನು ತೆಗೆದುಕೊಂಡಿದ್ದೇನೆ. ಏಳೆಂಟು ಚರಣಗಳಲ್ಲಿ ಪುರಂದರ ದಾಸರು ಈ ಪ್ರಸಂಗವನ್ನು ಬಹಳ ಸೊಗಸಾಗಿ ಬಣ್ಣಿಸಿದ್ದಾರೆ.

ಕೊ.ಕೊ: ಮೂಲದಲ್ಲಿಲ್ಲದ ಕೆಲವು ಪದಗಳನ್ನು (ಉ:ಮೂರು ಜಗ, ತೇಲಿಹೋದಳೋ) ಬಳಸಿರುವೆನಾದರೂ, ಮೂಲದಲ್ಲಿರುವ ಭಾವನೆ ಉಳಿದುಕೊಂಡಿದೆ ಎಂದುಕೊಂಡಿದ್ದೇನೆ!

ಕೊ.ಕೊ.ಕೊ: ಇಲ್ಲಿ ಬಳಸಿರುವ ಚಿತ್ರದ ಕಾಪಿರೈಟ್ ವಿಚಾರ ಗೊತ್ತಾಗುತ್ತಿಲ್ಲ. ಅಂತರ್ಜಾಲದಲ್ಲಿ ಎಲ್ಲೆಲ್ಲೂ ತೇಲಾಡುತ್ತಿದೆ ಈ ಚಿತ್ರ. ಬಳಕೆ ತಪ್ಪೆಂದು ಯಾರಾದರೂ ಹೇಳಿದಲ್ಲಿ ತ…

ಗಳಿಕೆ

ಗಳಿಸಬಹುದೆಷ್ಟು ಹಣವನು? ಬೊಮ್ಮ ಹಣೆಯಲಿ ಬರೆದಷ್ಟು!
ಮರುಭೂಮಿಯಲಾದರೂ ಮೇರುಗಿರಿಗೆ ಹೋದರೂ ಹೆಚ್ಚು ಸಿಗುವುದಿಲ್ಲ;
ಸಿರಿವಂತ ಜಿಪುಣರ ಮುಂದೆರಗದೇ ನೀನು ದಿಟ್ಟನಾದರೆ ಲೇಸು.
ಬಾವಿಯೇನು? ಕಡಲೇನು? ಕೊಡದಲ್ಲಿ ಹೆಚ್ಚು ತುಂಬುವುದಿಲ್ಲ!


ಸಂಸ್ಕೃತ ಮೂಲ:

ಯದ್ಧಾತ್ರಾ ನಿಜಫಾಲಪತ್ರಲಿಖಿತಂ ಸ್ತೋಕಂ ಮಹದ್ವಾ ಧನಮ್
ತತ್ಪ್ರಾಪ್ನೋತೀ ಮರುಸ್ಥಲೋSಪಿ ನಿತರಾಮ್ ಮೇರೌ ತತೌ ನಾಧಿಕಂ
ತದ್ಧೀರೋ ಭವ ವಿತ್ತವತ್ತ್ಸು ಕೃಪಣಂ ವೃತ್ತಿಂ ವೃಥಾ ಮಾ ಕೃಥಾಃ
ಕೂಪೇ ಪಶ್ಯ ಪಯೋನಿಧಿವಾಪಿ ಘಟಃ ಪ್ರಾಪ್ನೋತಿ ತುಲ್ಯಂ ಜಲಂ

यद्वात्रा निजफालपट्टलिखितं स्तोकं महद्वा धनं
तत्प्राप्नोति मरुस्थलेऽपि नितरां मेरौ च नातोऽधिकम्‌ ।
तद्धीरो भव वित्तवत्सु कृपणं वृत्तिं वृथा मा कृथाः
कूपे पश्य पयोनिधावपि घटो गृह्यति तुल्यं जलम्‌ ।।

-ಹಂಸಾನಂದಿ

ಮಾಡಲಾರದ ಕೆಲಸ

ಮರಳ ಹಿಂಡುತ ನೀವು ಎಣ್ಣೆಯನೂ ತೆಗೆದೀರಿ
ಬಿಸಿಲುಗುದುರೆ ನೀರಲ್ಲೇ ದಾಹ ನೀಗಿಸಿಕೊಂಡೀರಿ;
ಅಲೆದಾಡುತ ಕಂಡೀರಿ ಕೊಂಬಿರುವ ಮೊಲವನ್ನೂ
ಕಡುಮರುಳರ ಮನವನೆಂತು ಮಣಿಸಿ ಮೆಚ್ಚಿಸುವಿರಿ?

ಸಂಸ್ಕೃತ ಮೂಲ - ಭರ್ತೃಹರಿಯ ನೀತಿಶತಕದಿಂದ

ಲಭೇತ ಸಿಕತಾಸು ತೈಲಮಪಿ ಯತ್ನತಃ ಪೀಡಯನ್
ಪಿಬೇತ್ಚ ಮೃಗತೃಷ್ಣಿಕಾಸು ಸಲಿಲಂ ಪಿಪಾಸಾರ್ದಿತಃ ||
ಕದಾಚಿದಪಿ ಪರ್ಯಟನ್ಶಶವಿಷಾಣಮಾಸಾದಯೇನ್ನತು
ಪ್ರತಿನಿವಿಷ್ಟಮೂರ್ಖಜನಚಿತ್ತಮಾರಾಧಯೇತ್ ||

-ಹಂಸಾನಂದಿ

ಸೇಡಿಯಾಪು ಕೃಷ್ಣಭಟ್ಟರ ವಿಚಾರಪ್ರಪಂಚದಿಂದ - ಕನ್ನಡದಲ್ಲಿ ಋ ಕಾರದ ಬಗ್ಗೆ

Image
ಕೆಲವು ದಿನಗಳ ಹಿಂದೆ ಸೇಡಿಯಾಪು ಕೃಷ್ಣಭಟ್ಟರ ’ವಿಚಾರಪ್ರಪಂಚ’ ಎನ್ನುವ ಪುಸ್ತಕದ ಬಗ್ಗೆ ಸ್ವಲ್ಪ ಬರೆದಿದ್ದೆ. ಆ ಪುಸ್ತಕದ ಒಂದು ಬರಹವನ್ನು ಇಲ್ಲಿ ಹಾಕುತ್ತಿದ್ದೇನೆ - ಪುಸ್ತಕ ಓದಿಲ್ಲದವರಿಗೆ, ಒಂದು ಚೂರು ರುಚಿ ತೋರಿಸಿ, ಪುಸ್ತಕವನ್ನು ಓದುವಂತೆ ಮಾಡಲು ಒಂದು ಗಾಳ ಇದು ಅಂತ ಬೇಕಾದರೂ ಅಂದುಕೊಳ್ಳಿ!

ಕೊ: ಪುಸ್ತಕದ ಹೆಸರು, ಲೇಖಕರ ವಿವರಗಳನ್ನೆಲ್ಲ ಕೊಟ್ಟಿರುವುದರಿಂದ ಕಾಪೀರೈಟ್ ಮಿತಿಯನ್ನು ಮೀರಿಲ್ಲ ಎಂದುಕೊಂಡಿದ್ದೇನೆ!
ಕೊ.ಕೊ: ಓದಲು ಕಷ್ಟವಾದರೆ ಪುಟದ ಮೇಲೆ ಚಿಟಕಿಸಿ. ಸ್ವಲ್ಪ ಚೆನ್ನಾಗಿ ತೋರುವುದು.

-ಹಂಸಾನಂದಿ
ಗಾನ ವನ ಮಯೂರಿ

Image
ಇವತ್ತು (ಏಪ್ರಿಲ್ ೬,೨೦೧೧) ಸಂಗೀತಪ್ರೇಮಿಗಳನ್ನು ಅಗಲಿದ ಸಂಗೀತ ಕಲಾಚಾರ್ಯ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್ (೧೯೨೨-೨೦೧೧) ಮುತ್ತುಸ್ವಾಮಿ ದೀಕ್ಷಿತರ ಶಿಷ್ಯ ಪರಂಪರೆಯ ಒಂದು ಮುಖ್ಯ ಕೊಂಡಿ.ಇವತ್ತು ಅವರು ಸಂಗೀತ ಪ್ರೇಮಿಗಳ ಜೊತೆ ಇಲ್ಲದಿರಬಹುದು. ಆದರೆ, ಅವರ ಸಂಗೀತ ಇನ್ನೂ ನಮ್ಮೊಡನೆ ಇದೆ. ಮತ್ತೆ ಇನ್ನೂ ಬಹುಕಾಲ ಇರುವುದು.


ಚಿತ್ರ ಕೃಪೆ: ವಿಜಯ್ ಶರ್ಮ Picture Courtesy: Vijay Sarma

ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಾನು ಅವರ ಹೆಸರನ್ನೂ ಕೇಳಿರಲಿಲ್ಲ. ಸ್ವತಃ ನಾನೇ ಚೆನ್ನೈ ವಾಸಿಯಾಗಿ ಹದಿನೆಂಟು ತಿಂಗಳು ಕಳೆದಿದ್ದಾಗಲೂ ಒಮ್ಮೆಯೂ ಅವರ ಕಚೇರಿಯನ್ನು ಕೇಳಿರಲಿಲ್ಲ. ಎಂತಹ ದುರದೃಷ್ಟ! ನಂತರ ನನಗೆ ಅವರ ಕಚೇರಿಯನ್ನು ನೇರವಾಗಿ ಕೇಳುವ ಅವಕಾಶವೂ ಸಿಗಲೇ ಇಲ್ಲ.

ಮೊದಮೊದಲಿಗೆ ನಾನು ಕಲ್ಪಕಂ ಅವರ ಹೆಸರನ್ನು ಕೇಳಿದ್ದು ಅಂತರ್ಜಾಲದಲ್ಲೇ. ೧೯೯೪-೯೫ರಲ್ಲಿ ಇರಬೇಕು. ಆಗಿನ್ನೂ ನ್ಯೂಸ್ ಗ್ರೂಪ್ ಗಳ ಕಾಲ. rec.music.indian.classical ಅನ್ನುವುದೊಂದು ನ್ಯೂಸ್ ಗ್ರೂಪ್ ಇತ್ತು. ಆದರೆ ನಾನು ಅವರ ಸಂಗೀತದ ಅನುಭವ ಪಡೆಯುವುದಕ್ಕೆ ಇನ್ನೂ ಒಂದಷ್ಟು ವರ್ಷ, ಅಂದರೆ ಕಲ್ಪಕಂ ಅವರು ಕ್ಲೀವ್‍ಲ್ಯಾಂಡ್ ತ್ಯಾಗರಾಜ ಉತ್ಸವಕ್ಕೆ ಅಮೆರಿಕೆಗೆ ಬರುವುದಕ್ಕೆ, ಅವರ ಕಚೇರಿಯ ಮುದ್ರಿಕೆಗಳು ಅಂತರ್ಜಾಲದಲ್ಲಿ ದೊರೆಯುವವರೆಗೂ ಕಾಯಬೇಕಾಯಿತು.

ಮುತ್ತುಸ್ವಾಮಿ ದೀಕ್ಷಿತರ ಶಿಷ್ಯಪರಂಪರೆಗೆ ಸೇರಿದ ಶ್ರೀಮತಿ ಕಲ್ಪಕಂ ಸ್ವಾಮಿನಾಥನ್, ದೀಕ್ಷಿತರ ಕೃತಿಗಳ ಉತ್ಕ…