Posts

Showing posts from November, 2013

ಹೊರಳು ನೋಟ

ಕಣ್ಣು ತೋರುವವರೆಗು ನಲ್ಲನಾ ಹಾದಿಯನೆ ಕಾಯ್ತು ಬೇಸತ್ತಾಗಲೆ
ದಾರಿಗರ ಸಪ್ಪಳವು ನಿಲ್ಲುತಿರೆ ಹೊರಗೆಲ್ಲ ಹಬ್ಬುತಿರೆ ಕಾರ್ಗತ್ತಲೆ
ಹೆಣ್ಣಿವಳು ಮನೆಯೆಡೆಗೆ ತಿರುಗುತ್ತ ಹಾಕಿರಲು ಹೆಜ್ಜೆಯೊಂದನ್ನಾಕಡೆ
ಕೂಡಲೆಯೆ ಬಂದನೇನೋಯೆನುತ ಕತ್ತನ್ನು ಮೆಲ್ಲಹೊರಳಿಸಿ ನೋಳ್ಪಳೆ


ಸಂಸ್ಕೃತ ಮೂಲ: (ಅಮರುಕನ ಅಮರುಶತಕದಿಂದ, ಪದ್ಯ 76)

ಆದೃಷ್ಟಿ ಪ್ರಸಾರಾತ್ ಪ್ರಿಯಸ್ಯ ಪದವೀಂ ಉದ್ವೀಕ್ಷ್ಯ ನಿರ್ವಿಣ್ಣಯಾ
ವಿಚ್ಛಿನ್ನೇಶು ಪಥಿಶ್ವಃ ಪರಿಣತೌ ಧ್ವಾಂತೇ ಸಮುತ್ಸರ್ಪತಿ |
ದತ್ತೈಕಂ ಸಶುಚಾ ಗೃಹಂ ಪ್ರತಿ ಪದಮ್ ಪಾಂಥಃ ಸ್ತ್ರಿಯಾಸ್ಮಿನ್ ಕ್ಷಣೇ
ಮಾ ಭೂದಾಗತ ಇತ್ಯಾಮಂದವಲಿತಗ್ರೀವಂ ಪುನರ್ವೀಕ್ಷಿತಂ ||

आदृष्टिप्रसारात् प्रियस्य पदवीं उद्वीक्ष्य निर्विण्णया
विच्छिन्नेषु पथिश्वः परिणतौ ध्वान्ते समुत्सर्पति |
दत्तैकं सशुचा गृहं प्रति पदं पान्थः स्त्रियास्मिन् क्षणे
माभूदागत इत्यामंदवलितग्रीवं पुनर्वीक्षितं ||

-ಹಂಸಾನಂದಿ

ಕೊ: ನೋಳ್ಪಳೆ = ನೋಡಿದಳೆ, ನೋಡುತ್ತಿದ್ದಾಳಲ್ಲ ಅನ್ನುವರ್ಥದಲ್ಲಿ

ಕೊ: ಅಮರುಕನ ಒಂದು ಪದ್ಯವೇ ಒಂದು ಕಾವ್ಯಕ್ಕೆ ಸಮನೆಂದು ಪ್ರತೀತಿ. ಹಾಗಾಗಿ, ಆ ಮೂಲದಲ್ಲಿರುವ ಅದೇ ಭಾವನೆಗಳನ್ನ ಅಷ್ಟೇ ಕುಸುರಿನಿಂದ ಅನುವಾದ ಮಾಡುವುದು ಕಷ್ಟವೇ. ಆದರೂ , ಆದಷ್ಟೂ ಮೂಲವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದ್ದೇನೆ

ಕೊ.ಕೊ.ಕೊ: ಅನುವಾದವು ಯಾವುದೇ ಪೂರ್ವಪ್ರಸಿದ್ಧ ಛಂದಸ್ಸಿನಲ್ಲಿಲ್ಲದಿದ್ದರೂ, ಪಂಚಮಾತ್ರಾ ಗ…

ಒಲವೆಂಬ ಉರಿ

Image
ಅವನಲ್ಲಿ ನನ್ನೊಲುಮೆ ಜನಕೆ ತಿಳಿದೀತೆಂದು ಗೆಳತಿಯರನೂ ಇಂದು ನಂಬಲೊಲ್ಲೆ ಅವನತ್ತ ಒಂದೊಳ್ಳೆ ನೋಟ ಬೀರುವುದನೂ ಈ ಬಗೆಯು ತಡೆದಿಹುದು ಲಜ್ಜೆಯಲ್ಲೆ ಮನದೊಳಗಿನಿನಿತಷ್ಟು ಸುಳಿವು ಸಿಕ್ಕರೆ ಲೋಕ ನಿಪುಣವದು ಚುಚ್ಚಲಿಕೆ ಮಾತುಗಳಲೆ ಇನ್ನಾರ ಮೊರೆಹೊಗಲಿ ಹೇಳೆ ನೀನಮ್ಮಯ್ಯ ಒಲವೆಂಬ ಉರಿಯೆದೆಯ ಸುಟ್ಟಿಹುದೆಲೆ!
ಸಂಸ್ಕೃತ ಮೂಲ (ಅಮರುಕನ ಅಮರುಶತಕದಿಂದ - ೬೬):

ಆಸ್ತಾಂ  ವಿಶ್ವಸನಂ ಸಖೀಷು ವಿದಿತಾಭಿಪ್ರಾಯ ಸಾರೇ ಜನೇ ತತ್ರಾಪ್ಯರ್ಪಯಿತುಂ ದೃಶಂ ಸುರಚಿತಾಂ ಶಕ್ನೋಮಿ ನ ವ್ರೀಡಯಾ ಲೋಕೋಪ್ಯೇಷ ಪರೋಪಹಾಸಚತುರಃ ಸೂಕ್ಷ್ಮೇಂಗಿತಜ್ಞೋಪ್ಯಲಮ್ ಮಾತಃ ಕಂ ಶರಣಂ ವ್ರಜಾಮಿ ಹೃದಯೇ ಜೀರ್ಣೋನುರಾಗಾನಲಃ


-ಹಂಸಾನಂದಿಚಿತ್ರ : http://www.exoticindiaart.com/product/paintings/virahini-radha-rani-on-banks-of-yamuna-with-peacock-OT15/

ಹೊಸ ವರ್ಷದ ಮೊದಲ ವಾರಾಂತ್ಯದಲ್ಲಿ "ಪುಟ್ಟಮಲ್ಲಿಗೆ ಎಸ್ಟೇಟ್"

Image
ಎರಡು ಪ್ರದರ್ಶನಗಳು - ಜನವರಿ ೪, ೨೦೧೪ ಮತ್ತು  ಜನವರಿ ೫ರಂದು

ಹಿಸ್ಟಾರಿಕ್ ಹೂವರ್ ಥಿಯೇಟರ್ , ಸ್ಯಾನ್ ಹೋಸೆ

ಟಿಕೆಟ್  ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದು: