Posts

Showing posts from July, 2014

ನನ್ನಿನಿಯ

Image
ದೂರವಿದ್ದೇ
ಮೈಯ ಸುಟ್ಟನು;  

ಅವನ ಸೇರಲು   
ನನ್ನ ಅಂಗಗಳೇ
ಕರುಬುವುವು 
ಒಂದರ ಮೇಲೊಂದು

ಕಣ್ಣಿಗೆ ಬಿದ್ದೊಡನೆ
ಎನ್ನೆದೆಯ  ಕಸಿದ ;
ಸೋಕಿದರೆ
ಅಂಕೆ ತಪ್ಪುವುದೊಡಲು

ಅವನ ಪಡೆದರೂ
ಚಣದ ಸುಖ 
ತೆರಳುವುದು
ಅವನೊಡನೆಯೇ

ಇದಕೂ ಮೀರಿದ
ಅಚ್ಚರಿಯೊಂದಿದೆ
ಇಂತಿದ್ದರೂ ಅವನೇ
ನನ್ನಿನಿಯ!


ಸಂಸ್ಕೃತ ಮೂಲ ( ಅಮರುಕನ ಅಮರುಶತಕದ್ದೆಂದು ವಿದ್ಯಾಧರನ ಸುಭಾಷಿತ ರತ್ನಕೋಶ (೭೩೪)ದಲ್ಲಿ ಕೊಟ್ಟಿದೆ):


ದಹತಿ ವಿರಹೇಷ್ವಂಗಾನೀರ್ಷ್ಯಾ ಕರೋತಿ ಸಮಾಗಮೇ 
ಹರತಿ ಹೃದಯಂ ದೃಷ್ಟಃ ಸ್ಪೃಷ್ಟಃ ಕರೋತ್ಯವಶಾಂ ತನುಮ್
ಕ್ಷಣಮಪಿ ಸುಖಂ ಯಸ್ಮಿನ್ ಪ್ರಾಪ್ತೇ ಗತೇ ಚ ನ ಲಭ್ಯತೇ 
ಕಿಂ ಅಪರಂ ಅತಶ್ಚಿತ್ರಂ ಯನ್ಮೇ ತಥಾಪಿ ಸ ವಲ್ಲಭಃ 

दहति विरहेष्व्ङ्गानीर्ष्यां करोति समागमे 
हरति हृदयं दृष्टः स्पृष्टः करोत्य्वशां तनुम् 
क्षणम् अपि सुखं यस्मिन्प्राप्ते गते च न लभ्यते
किमपरम् अतश्चित्रं यन्मे तथापि स वल्लभः २२.३५ (७३४)

-ಹಂಸಾನಂದಿ

ಕೊ: ಅಮರುಕನದ್ದು ಅಮರು ಶತಕವಾದ್ದರಿಂದ ನೂರು ಪದ್ಯಗಳು ಇರಬೇಕಾಗಿದ್ದರೂ, ಅಮರುಶತಕದ್ದೇ  ಬೇರೆ ಬೇರೆ ಪ್ರತಿಗಳಲ್ಲಿ, ಟೀಕೆಗಳಲ್ಲಿ ಸಿಗುವುದನ್ನು ಸೇರಿಸಿದರೆ ಅದಕ್ಕಿಂತ ಹೆಚ್ಚು ಪದ್ಯಗಳು ಇವೆ. ಇದಕ್ಕೂ ಮಿಗಿಲಾಗಿ, ಇನ್ನು ಕೆಲವು ಬೇರೆ ಪದ್ಯ ಸಂಗ್ರಹಗಳಲ್ಲಿ ಅಮರುಕನದ್ದೆಂದು ಹೇಳಲಾಗಿರುವ ಹಲವು ಪದ್ಯಗಳು, ಅಮರುಶತಕದ ಟೀಕೆಗಳಲ್ಲೇ ಇಲ್ಲ.ಹಾಗಾಗಿ, ಈ ಪದ್ಯ ಪ್ರಕ್ಷಿಪ್ತವೂ ಇರಬಹುದು. ಆದರೂ ವಿದ್ಯಾಕರನು ಅಮರುಕನದ…

ಕೈಗೆಟುಕದ ನಲ್ಲ

Image
ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ?
ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ!

ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4)
ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ ಪಇಬಿಂಬಂವ್ವ ಜ್ಜಮ್ಮಿ ದುಃಖಂ ನ ಸಂಕಮಇ ||

फुट्टन्तेण वि हिअएण मामि कह णिव्वरिज्जए नम्मि आदंसे पइबिम्बं व्व ज्जम्मि दुःखं ण संकमइ ||
ಸಂಸ್ಕೃತ ಅನುವಾದ (ನಿರ್ಣಯಸಾಗರ ಮುದ್ರಣಾಲಯ ಆವೃತ್ತಿಯಿಂದ) :
ಸ್ಫುಟತಾಪಿ ಹೃದಯೇನ ಮಾತುಲಾನಿ ಕಥಂ ನಿವೇದಯತೇ ತಸ್ಮಿನ್ ಆದರ್ಶೇ ಪ್ರತಿಬಿಂಬಮಿವ ಯಸ್ಮಿನ್ ದುಃಖಂ ನ ಸಂಕ್ರಮತಿ 
स्फुटतापि हृदयेन मातुलानि कथं निवेद्यते तस्मिन् आदर्शे प्रतिबिम्बमिव यस्मिन्दुःखं अ सङ्क्रामति

-ಹಂಸಾನಂದಿ

ಚಿತ್ರ: http://www.delhihaat.com/wp-content/uploads/2012/09/batik-painting.jpg ಇಲ್ಲಿಂತ ತೆಗೆದುಕೊಂಡದ್ದು.

ಕತ್ತೆಗೊಂದು ಪುಕ್ಕಟೆ ಸಲಹೆ

Image
ಕತ್ತೆ! ಏತಕೆ ಬಟ್ಟೆ ಹೊತ್ತೊಣಗಿರುವ ಹುಲ್ಲನು ತಿನ್ನುವೆ?
ರಾಜಲಾಯಕೆ ಹೋಗಿ ಸುಮ್ಮನೆ ಕಡಲೆ ಉಸಳಿಯ ಮೆಲ್ಲು ನೀ!
"ಬಾಲವಿದ್ದುದು ಕುದುರೆ" ಯೆನ್ನುವ ಮಂದಿಯಾಳ್ವಿಕೆ ಅಲ್ಲಿದೆ ;
ಅವರು ನುಡಿದರೆ ರಾಜಗೊಪ್ಪಿಗೆ! ಇತರರಿರುವರು ತೆಪ್ಪಗೆ!

ಸಂಸ್ಕೃತ ಮೂಲ  (ಭಲ್ಲಟಶತಕದಿಂದ): 

ರೇ ರೇ ರಾಸಭ ವಸ್ತ್ರಭಾರವಹನಾತ್ ಕುಗ್ರಾಸಮಶ್ನಾಸಿ ಕಿಂ
ರಾಜಾಶ್ವಾವಸಥಂ ಪ್ರಯಹಿ ಚಣಕಾಭ್ಯೂಷಾನ್ ಸುಖಂ ಭಕ್ಷಯ
ಸರ್ವಾನ್ ಪುಚ್ಛವತೋ ಹಯಾನಿತಿ ವದಂತ್ಯತ್ರಾಧಿಕಾರೇ ಸ್ಥಿತಾ
ರಾಜಾ ತೈರುದ್ದಿಷ್ಟಮೇವ ಮನುತೇ ಸತ್ಯಂ ತಟಸ್ಥಾಃ ಪರೇ
रे रे रासभ वस्त्रभारवहनात् कुग्रासमश्नासि किं 
राजाश्वावसथं प्रयाह्जि चणकभ्यूषान् सुखं भक्षय | 
सर्वान् पुच्छवतो हयानभिवदन्त्यत्राधिकारे स्थिताः 
राजा तैरुपदिष्टमेव मनुते सत्यं तटस्थाः परे ||

-ಹಂಸಾನಂದಿ

ಕೊ: ಸಂಸ್ಕೃತಮೂಲವು ಶಾರ್ದೂಲವಿಕ್ರೀಡಿತ ಎಂಬ ವೃತ್ತ ಛಂದಸ್ಸಿನಲ್ಲಿದೆ. ಅನುವಾದವು ಮಲ್ಲಿಕಾ ಮಾಲೆ (ಮತ್ತಕೋಕಿಲವೆಂದೂ ಹೆಸರಿದೆ) ಎಂಬ ವೃತ್ತದ ಧಾಟಿಯಲ್ಲಿದೆ.

ಕೊ.ಕೊ: ಹಲವು ವರ್ಷಗಳ ಹಿಂದೆ ಬೇರೊಂದು ಅನುವಾದ ಮಾಡಿದ್ದೆ - ಆದರೆ ಆಗ ಛಂದಸ್ಸಿನ ಮೇಲೆ ಗಮನವಿಟ್ಟಿರಲಿಲ್ಲ. ಅದನ್ನು ಇಲ್ಲಿ ಓದಬಹುದು.

ಚಿತ್ರ ಕೃಪೆ: http://www.vectorstock.com/royalty-free-vector/cartoon-of-donkey-for-coloring-vector-927188

ಕಾಣದ ಕನಸು

Image
ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ
ಪುಣ್ಯವನುಗೈದವರು! ಸಂದೇಹವೇಕೆ?
ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ
ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ?

ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ, ೪- ೯೭):

ಧಣ್ಣಾ ತಾ ಮಹಿಲಾಓ ಜಾ ದಇಅಂ ಸಿವಿಣಏ ಪೇಚ್ಛಂತಿ
ಣಿದ್ದವ್ವಿವ ತೇಣ ವಿಣಾ ಣಏತಿ  ಕಾ ಪೇಚ್ಛಏ ಸಿವಿಣಂ

ಸಂಸ್ಕೃತಾನುವಾದ: ನಿರ್ಣಯ ಸಾಗರ ಮುದ್ರಣಾಲಯದ ಟೀಕೆಯಿಂದ:

ಧನ್ಯಾಸ್ತಾ ಮಹಿಲಾ ಯಾ ದಯಿತಂ ಸ್ವಪ್ನೇಪಿ ಪ್ರೇಕ್ಷ್ಯಂತೇ  |
ನಿದ್ರೈವ ತೇನ ವಿನಾ ನೈತಿ ಕಾ ಪ್ರೇಕ್ಷತೇ ಸ್ವಪ್ನಂ ||

-ಹಂಸಾನಂದಿ


ಕೊ: ಚೌಪದಿಯಾಗಿ ಹೊಂದಿಸಲು ಮೂಲದಲ್ಲಿ ಇಲ್ಲದ ಕೆಲವು ಪದಗಳನ್ನು ( ಸಂದೇಹವೇಕೆ, ಎಂಬ ಮಾತು ಮೂಲದಲ್ಲಿಲ್ಲ) - ಬಳಸಿದ್ದೇನೆ. ಅದರಿಂದ ಪದ್ಯದ ಒಟ್ಟಾರೆ ಭಾವಕ್ಕೆ ಕುಂದಾಗಿಲ್ಲವೆಂದು ಭಾವಿಸಿರುವೆ.

ಕೊ.ಕೊ: ಸಂಸ್ಕೃತದ ಹಲವು ಪದಗಳು ಸ್ವಲ್ಪ ಬದಲಾವಣೆ ಹೊಂದಿ ಕನ್ನಡದಲ್ಲಿ ದಿನಬಳಕೆಯಲ್ಲಿರುವುದು ಸರಿಯಷ್ಟೆ. ಹಲವು ಬಾರಿ ಅವು ನೇರವಾಗಿ ಬರದೇ, ಪ್ರಾಕೃತದಿಂದ ಬಂದಿರುತ್ತವೆ. ಉದಾಗರಣೆಗೆ , ನಿದ್ರಾ ಎಂಬ ಪದವು, ಕನ್ನಡದಲ್ಲಿ ನಿದ್ರೆ, ನಿದ್ದೆ ಎಂಬ ಎರಡೂ ರೀತಿಯಲ್ಲಿ ಬಳಕೆಯಲ್ಲಿದೆ.  ಆಕಾರ ದಿಂದ ಮುಗಿಯುವ ಸಂಸ್ಕೃತ ಪದಗಳು ಎ ಕಾರದಿಂದ ಕನ್ನಡದಲ್ಲಿ ಬದಲಾಗುವುದು ಸಾಮಾನ್ಯ ರೀತಿ ( ಸೀತಾ -> ಸೀತೆ, ಕವಿತಾ -> ಕವಿತೆ, ಲತಾ -> ಲತೆ, ವನಿತಾ -> ವನಿತೆ), ಆದರೆ ನಿದ್ರಾ ಎಂಬುದು ನಿದ್ರೆ ಆಗಿರುವುದು ಸರಿಯೇ. …

ಕೋರಿಕೆ

Image
ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು!
ಓ ಮದನ!
ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ  ಅವನನೂ ಹೊಡೆದು ಗಾಸಿಗೊಳಿಸುವೆಯಾ? 
ಪ್ರಾಕೃತ ಮೂಲ  (ಹಾಲನ ಗಾಹಾಸತ್ತಸಯಿ, ೫-೪೧) 
ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ  ತುಜ್ಝ ಅಚ್ಚಿಸ್ಸಮ್| ಜ‍ಇ ತಂ ಪಿ ತೇಣ ಬಾಣೇಣ ವಿಜ್ಝಸೇ ಜೇಣ ಹಂ ವಿಜ್ಝಾ ||
ಸಂಸ್ಕೃತ ಅನುವಾದ (ನಿರ್ಣಯ ಸಾಗರ ಮುದ್ರಣಾಲಯ ಟೀಕೆ):
ಜನ್ಮಾಂತರೇಪಿ ಚರಣೌ ಜೀವೇನ ಖಲು ಮದನ ತವಾರ್ಚಯಿಷ್ಯಾಮಿ ಯದಿ ತಮಪಿ  ತೇನ ಬಾಣೇನ ವಿಧ್ಯಸಿ ಯೇನಾಹಂ ವಿದ್ಧಾ ||
-ಹಂಸಾನಂದಿ
ಚಿತ್ರಕೃಪೆ : ವಿಕಿಮೀಡಿಯಾ , ಕಬ್ಬಿನ ಬಿಲ್ಲನ್ನು ಹಿಡಿದ ಮನ್ಮಥ

ಸಾಟಿ

Image
ತುಂಬಿದ್ದರೇನಂತೆ ಜಗದಲ್ಲಿ ಚೆಲುವೆಯರು  ಸಾವಿರದ ಲೆಕ್ಕದಲ್ಲಿ ? ಇವಳ ಬಲಬದಿಯಂದಕ್ಕೆ ಇರುವುದೊಂದೇ ಸಾಟಿ    ಇವಳೆಡದ ಅರ್ಧದಲ್ಲಿ!  

ಪ್ರಾಕೃತಮೂಲ (ಹಾಲನ ಗಾಹಾ ಸತ್ತಸಯಿಯಿಂದ, ಪದ್ಯ ೪೦೩) 
ಏದ್ದಹಮೇತ್ತಮ್ಮಿ ಜಏ ಸುಂದರಮಹಿಲಾಸಹಸ್ಸಭರಿಏ ವಿ ಅಣುಹರಇ ಣವರ ತಿಸ್ಸಾ ವಾಮದ್ಧಂ ದಾಹಿಣದ್ಧಸ್ಸ ||  
(ಸಂಸ್ಕೃತಾನುವಾದ - ನಿರ್ಣಯ ಸಾಗರ ಮುದ್ರಣಾಲಯ ಆವೃತ್ತಿಯಿಂದ):
ಏತಾವನ್ಮಾತ್ರೇ ಜಗತಿ ಸುಂದರ ಮಹಿಲಾಸಹಸ್ರಭೃತೇಪಿ ಅನುಹರತಿ ಕೇವಲಂ ತಸ್ಯಾ ವಾಮಾರ್ಧಂ ದಕ್ಷಿಣಾರ್ಧಸ್ಯ ||
-ಹಂಸಾನಂದಿ
ಚಿತ್ರ ಕೃಪೆ: ಕಲಾವಿದ ಕೈಲಾಶ್ ರಾಜ್ ಅವರ ಮಧುಮಾಧವಿ ರಾಗಿಣಿಯ ರಾಗಮಾಲಾ ಚಿತ್ರ (http://www.exoticindiaart.com/product/paintings/ragini-madhumaadhavi-HJ93/ ಇಲ್ಲಿಂದ)