Posts

Showing posts from November, 2014

ದುರ್ಗಾಸ್ತುತಿ

Image
ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!


-ಹಂಸಾನಂದಿ 
ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು.
ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು ಕೊಟ್ಟು ಅದನ್ನು ಅಳವಡಿಸಿ ಪದ್ಯ ಬರೆಯುವ ಕಸರತ್ತಿಗೆ ದತ್ತಪದಿ ಎಂದು ಹೆಸರು.   ಇದಕ್ಕೆ ನಾನಿಲ್ಲಿ ಬರೆದಿರುವ ಉತ್ತರ ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ.
ಕೊ.ಕೊ.ಕೊ: ದೇವರನ್ನು ನಾನಾರೂಪದಲ್ಲಿ ಪೂಜಿಸುವ ನಮಗೆ , ಕಾಳಿಯೇನು ? ದುರ್ಗಿಯೇನು? ಅವರು ಕೇಳಿದ್ದು ದುರ್ಗಾಸ್ತುತಿಯಾದರೂ, ಮೊಗ ಕಾರ್ಮುಗಿಲ ಬಣ್ಣದವಳಾದ್ದರಿಂದ ಈ ದೇವಿ ಕಾಳಿಯೇ ಇರಬೇಕು! (ಚಿತ್ರ ಕೃಪೆ: http://upload.wikimedia.org/wikipedia/commons/c/c5/Kali_Devi.jpg )
ಹೀಗೊಂದು ಟೈಮ್ ಪಾಸ್ ದೇವೀ ಸ್ತುತಿ

Image
ಅಪರೂಪಕ್ಕೊಮ್ಮೆ ಸಮಯ ಸಿಕ್ಕಿತು ಅಂತ ಇವತ್ತು ಗೂಗಲ್ ಡ್ರೈವ್ ಅನ್ನು ಗುಡಿಸ್ತಾ ಇದ್ದೆ. ಆ ಸಮಯಕ್ಕೆ, ಸರಿ ಸುಮಾರು ಒಂದು ವರ್ಷ ಹಿಂದೆ ಬರೆದಿದ್ದ ಬರಹವೊಂದು ಕೈಗೆ ಸಿಕ್ಕಿತು. ಒಮ್ಮೊಮ್ಮೊ ಹೀಗೇನೇ, ಮರೆತೇ ಹೋಗಿರುತ್ತೆ. ಈ ಬ್ಲಾಗು ಪಾಗು ಇತ್ಯಾದಿಗಳೆಲ್ಲ ಬರೋಕೆ ಮುಂಚೆ ಈ ರೀತಿ ಏನಾದರೂ ಹೊಳೆದಿದ್ದರೆ ಅದು ಒಂದಷ್ಟು ದಿನವಾದ ಮೇಲೆ ಅದರ ನೆನಪು ಪೂರ್ತಿ ಹಾರಿಹೋಗಿರ್ತಿತ್ತು. ಈಗ ಇದ್ದು ಬದ್ದಿದ್ದನ್ನೆಲ್ಲ ಒಂದು ಕಡೆ ಗುಪ್ಪೆ  ಹಾಕೋದಕ್ಕೆ ಒಂದು ಜಾಗವೇನೋ ಇರತ್ತೆ. ಆದರೆ, ಅದನ್ನೂ ಆಗಾಗ ಗುಡಿಸಿಟ್ಟುಕೊಳ್ಳದೇ ಹೋದರೆ, ಮತ್ತೆ ಹಳೇ ಪ್ರಸಂಗವೇ! ಹೋಗಲಿ ಬಿಡಿ ಆ ಬರಹವನ್ನ ಇನ್ನೊಮ್ಮೆ ಹಾಕ್ತೇನೆ ಇಲ್ಲೇ.

ಆದ್ರೆ ಈ ಗುಡಿಸಿ ಗುಂಡಾಂತರ ಮಾಡೋವಾಗ ಒಂದು ಹಳೇ ಸಮಸ್ಯಾಪೂರಣವೂ ಸಿಕ್ತು. ಸಾರಿ. ಪೊಲಿಟಿಕಲಿ ಕರೆಕ್ಟ್ ಆಗಿರಬೇಕಾದರೆ, ಇದು ದತ್ತಪದಿ. ಈಗ ಏನಪ್ಪಾ ಅಂದ್ರೆ , ಪದ್ಯದ ಒಂದು ಸಾಲು ಕೊಟ್ಟು, ಉಳಿದ ಸಾಲುಗಳನ್ನ ಬರೆಯಿರಿ ಅಂದರೆ ಅದು ಸಮಸ್ಯಾಪೂರಣ. ಯಾವುದೋ ನಾಲ್ಕು ಪದ ಕೊಟ್ಟು ಈ ಪದಗಳನ್ನು ಬಳಸಿಕೊಂಡು ಕೊಟ್ಟಿರುವ ನಿಬಂಧನೆಗಳಿಗೆ ಅನುಗುಣವಾಗಿ ಪದ್ಯವನ್ನು ಬರೆಯುವುದು ದತ್ತಪದಿ. ನೀವು ಯಾವುದಾದರೂ ಅವಧಾನವನ್ನ ನೋಡಿದ್ದರೆ ನಿಮಗೆ ಈ ವಿಂಗಡಣೆ ಗೊತ್ತಿರುತ್ತೆ. ಇಲ್ಲದಿದ್ದರೂ ಪರವಾಗಿಲ್ಲ, ಇದೊಂದು ಪದ್ಯ (ನವ್ಯ ಕವಿತೆ ಅಲ್ಲ, ಆದರೆ ಪರಂಪರೆಯಿಂದ ಬಂದಿರುವ ಛಂದಸ್ಸುಗಳಲ್ಲಿ ಪದ್ಯ ಬರೆಯುವ ಆಟ.

ಈ ದತ್ತಪದಿ ಬರೆದಿದ್ದೂ ಸುಮಾರು ಹೋದ…

ಉದುರೆಲೆಗಾಲ

Image
ಬರಲು ಹೇಮಂತ ಋತು ಚುಮುಚುಮು
ಕೊರೆವ ಗಾಳಿಗೆ ನಡುಗಿರಲು ಧರೆ
ಕೊರಗುತಲಿ ಭೂತಾಯ ಮಕ್ಕಳು ಸಕಲ ತರುನಿಕರ
ಭರದಿ ತಮ್ಮೆಲೆಗಳನು ಕೆಂಪಿಗೆ
ತಿರುಗಿಸುತ ಕೆಳಗುದುರಿಸುತಲೀ
ತರಗು ಹೊದಿಕೆಯ ಹೊದಿಸಿಬಿಟ್ಟವು ಬಿಸುಪ ನೀಡಲಿಕೆ!

-ಹಂಸಾನಂದಿ


ಕೊ: ವರ್ಷೇ ವರ್ಷೇ ಚಳಿಗಾಲದಲ್ಲಿ ಎಲ್ಲ ಎಲೆಗಳನ್ನೂ ಉದುರಿಸುವ ಮರಗಳಿರುವ ಸ್ಥಳಗಳಿಗೆ ಒಪ್ಪುವ ಪದ್ಯವಿದು. ಕರ್ನಾಟಕದಂತಹ ಕಡೆ ಎಲೆಯುದುರಿಸುವ ಮರಗಳು ಕಡಿಮೆಯೇ.

ಕೊ.ಕೊ: ಪದ್ಯವು ಭಾಮಿನಿ ಷಟ್ಪದಿಯಲ್ಲಿದೆ.

ಚಿತ್ರ ಕೃಪೆ: ಪೂರ್ಣಿಮಾ ರಾಮಪ್ರಸಾದ್

ಸಿರಿಯ ಮಹಿಮೆ

Image
ಗರಳಗಳಲೇ ಘೋರ ಹಾಲಾಹಲವೆನುವ ವಿಷವೆಂಬರು ಸಿರಿಯೆನುವ ವಿಷವದಕು ಕೆಡುಕೆಂಬುದನು ದಿಟದಲಿ ಕಾಣರು!  ಹರನು ನಂಜನ್ನುಣಲು ಗಂಟಲು ಅವನದಾದುದು ನೀಲಿಯು  ಸಿರಿಯ ವರಿಸಿದ ಹರಿಯ ಮೈಯಿಡಿ ನೀಲಿಗಟ್ಟಿತು ಕಾಣಿರೊ!
ಸಂಸ್ಕೃತ ಮೂಲ ( ಅಷ್ಟಾವಧಾನಿ  ಡಾ.ಶಂಕರ್ ರಾಜಾರಾಮನ್ ಅವರದ್ದು):
ಹಾಲಾಹಲಾದುಗ್ರತರಪ್ರಭಾವಂ ವಿಶ್ಃಅಂ ಪ್ರತೀಮೋ ಭುವನೇಷು ಲಕ್ಷ್ಮೀಮ್ |
ಯುಕ್ತೋ ಹರಸ್ತೇನ ತು ನೀಲಕಂಠೋ ಯುಕ್ತಸ್ತಯಾ ನೀಲತನುರ್ಮುರಾರಿಃ  ||

हालाहलादुग्रतरप्रभावं विषं प्रतीमो भुवनेषु लक्ष्मीम् ।  युक्तो हरस्तेन तु नीलकण्ठो युक्तस्तया नीलतनुर्मुरारिः ॥

-ಹಂಸಾನಂದಿ
ಕೊ: ಅವಧಾನಿ  ಡಾ.ಶಂಕರ್ ರಾಜಾರಾಮನ್ ಅವರು ವೃತ್ತಿಯಲ್ಲಿ ವೈದ್ಯರು, ಮತ್ತೆ  ಪ್ರವೃತ್ತಿಯಲ್ಲಿ ಕವಿ. ಸಂಸ್ಕೃತ ಮತ್ತೆ ಕನ್ನಡದಲ್ಲಿ ಅಷ್ಟಾವಧಾನವನ್ನು ನಡೆಸಬಲ್ಲ ನಮ್ಮನಾಡಿನ ಕೆಲವೇ ಪ್ರತಭಾನ್ವಿತರಲ್ಲಿ ಇವರೊಬ್ಬರು.
ಕೊ.ಕೊ: ದೇವಾಸುರರು ಸಮುದ್ರಮಥನ ಮಾಡಿದಾಗ ಅದರಲ್ಲಿ ಮೊದಲು ಹಾಲಾಹಲ*ವೆಂಬ ಘೋರವಾದ ವಿಷ ಹುಟ್ಟಿತು. ಜಗತ್ತನ್ನು ಅದರಿಂದ ಕಾಪಾಡಲು ಶಿವನು ಅದನ್ನು ಕುಡಿದಾಗ, ಅವನಿಗೆ ಅದರಿಂದಾಗಬಹುದಾದ ಹಾನಿಯನ್ನು ತಡೆಯಲು, ಪಾರ್ವತಿಯು ಶಿವನ ಗಂಟಲನ್ನು ಒತ್ತಿಹಿಡಿದಿದ್ದರಿಂದ, ಆ ವಿಷವು ಅವನ ಗಂಟಲಲ್ಲೇ ನಿಂತು, ಅವನ ಗಂಟಲು ನೀಲಿ ಬಣ್ಣವನ್ನು ಹೊಂದಿತು. ಈ ಕಾರಣಕ್ಕಾಗಿಯೇ ಅವನು ನೀಲಕಂಠನೂ, ನಂಜುಂಡನೂ ಆದನು.
ಕೊ.ಕೊ.ಕೊ: ಸಮುದ್ರ ಮಂಥನವನ್ನು ಮುಂದುವರೆಸಿದಾಗ, ಅದರ…