Posts

Showing posts from December, 2014

ಒಲವಿನ ಓಲೆ

Image
ಪದ್ಯಪಾನದಲ್ಲಿ ಈಚೆಗೆ ಕೇಳಿದ್ದ ಒಂದು ಪ್ರಶ್ನೆ - ಚಿತ್ರಕ್ಕೆ ಪದ್ಯ. ರಾಜಾ ರವಿವರ್ಮನ ಪ್ರಸಿದ್ಧವಾದ ದಮಯಂತಿಯ ಚಿತ್ರಕ್ಕೆ ನಾನು ಬರೆದ ಎರಡು ಪದ್ಯಗಳು ಇಲ್ಲಿವೆ.

ಭಾಮಿನಿ ಷಟ್ಪದಿಯಲ್ಲಿ:

ಮಂಚದಿಂದೇಳುತಲಿ ತಾ ಜರಿ
ಯಂಚು ರೇಸಿಮೆ ಸೀರೆಯುಟ್ಟಳು
ಅಂಚೆನಡಿಗೆಯ ರಾಜಕುವರಿಯು ಚೆಲುವೆ ದಮಯಂತಿ
ಹೊಂಚಿನಲಿ ಮನದಳವ ತಿಳುಹಲು
ಮುಂಚೆಯೋಲೆಯ ಬರೆವೆ ನಳನಿಗೆ
ಅಂಚೆವಕ್ಕಿಯಕೂಡೆ ಕಳುಹುವೆನೆಂಬ ಮುಡಿವಿನಲಿ

ಮಲ್ಲಿಕಾ ಮಾಲೆ ಮಾತ್ರಾವೃತ್ತದಲ್ಲಿ:

ಓಲೆ ಬರೆಯುವೆ ನಲ್ಲಗೀಗಲೆಯೆಂದು ಚೆಲುವೆಯು ವೇಗದೊಳ್
ತಾಲಪತ್ರವ ತಂದಿಹಳ್ ದಮಯಂತಿಯಿನಿಯನ ನೆನೆದಿಹಳ್
ಹಾಲಬಣ್ಣದ ಅಂಚೆವಕ್ಕಿಯ ಮೊಗದೊಳೇ ನಳ ಕಂಡಿರಲ್
ಮಾಲೆ ಮಾಡುತ ಕಣ್ಣ ನೋಟಗಳಲ್ಲೆ* ಕೊರಳಿಗೆ ತೊಡಿಸಿದಳ್


*ನಳನನ್ನೇ ನೆನೆವ ದಮಯಂತಿಗೆ ಹಂಸ ಪಕ್ಷಿಯ ಬದಲು ನಳನೇ ಕಂಡಂತಾಗಿ, ಕಣ್ಣ ನೋಟದಲ್ಲೇ, ಆ ಹಂಸದ ಕೊರಳಿಗೆ ಮಾಲೆ ತೊಡಿಸಿದಳೆಂಬ ಭಾವದಲ್ಲಿ

-ಹಂಸಾನಂದಿ
ಭಾಮಿನಿ ಷಟ್ಪದಿ

ಷಟ್ಪದಿ ಅಂದ್ರೆ ಆರು ಪಾದಗಳಿರೋದು ಅಂತ ಅರ್ಥ. ಅಂದ್ರೆ ಇರುವೆ ಗೆದ್ದಲು ಜೇನು ನೊಣಗಳಂತಹ ಆರು ಕಾಲುಗಳಿರೋ ಹುಳು ಹುಪ್ಪಟೆ ಅಂತ ಅಂದ್ಕೊಂಡ್ರೆ ಅದು ಒಂದು ತರಹದಲ್ಲಿ ಸರಿಯೇ. ಹಾಗಂದ್ರೆ, ಭಾಮಿನಿ ಷಟ್ಪದಿ ಅಂದ್ರೆ  ರಾಣಿ ಜೇನುಹುಳ ಅಂದ್ಕೊಂಡ್ಬಿಡಬೇಡಿ! ನಾನು ಹೇಳೋಕೆ ಹೊರಟಿದ್ದು ಕನ್ನಡದಲ್ಲಿ ಪ್ರಸಿದ್ಧವಾದ ಒಂದು ಪದ್ಯ ಪ್ರಕಾರವಷ್ಟೆ.

ಕನ್ನಡ ಕಾವ್ಯದಲ್ಲಿ ಬಳಕೆಯಾಗಿರುವ ಛಂದಸ್ಸುಗಳಲ್ಲಿ ಭಾಮಿನಿ ಷಟ್ಪದಿಯೇ ಅತಿ ಹೆಚ್ಚು ಪರಿಚಿತವೂ ಜನಮನ್ನಣೆಯನ್ನು ಗಳಿಸಿರುವ ಛಂದಸ್ಸು ಎಂದರೂ ತಪ್ಪಿಲ್ಲ. ಹಾಗಾಗಿಯೇ ಅದು ಹದಿನೈದನೇ ಶತಮಾನದ ಕುಮಾರವ್ಯಾಸನ ಕರ್ನಾಟಭಾರತ ಕಥಾಮಂಜರಿ (ಗದುಗಿನ ಭಾರತ) ದಿಂದ ಹಿಡಿದು ಇಪ್ಪತ್ತೊಂದನೇ ಶತಮಾನದಲ್ಲಿ ಪ್ರಕಟವಾಗಿರುವ ನರಹರಿ ಅವರ ಯೇಸುಚರಿತೆ ಎಂಬ ಕಾವ್ಯದ ವರೆಗೆ ಹಲವಾರು ಕಾವ್ಯಗಳಲ್ಲಿ ಪ್ರಯೋಗವನ್ನು ಕಂಡುಕೊಂಡಿದೆ.

ನಮ್ಮಲ್ಲಿ ಹೆಚ್ಚಿನವರಿಗೆ ಛಂದಸ್ಸು ಅಂದರೆ ಒಂದು ಕಬ್ಬಿಣದ ಕಡಲೆ, ಪುಸ್ತಕದ ಬದನೇಕಾಯಿ ಅನ್ನುವ ಅಭಿಪ್ರಾಯವಿದೆ. ಅದಕ್ಕೆ ಮುಖ್ಯ ಕಾರಣ ಚಿಕ್ಕಂದಿನಲ್ಲಿ ಈ ರೀತಿಯ ಪದ್ಯಗಳನ್ನು ಓದುವ ಶೈಲಿಯನ್ನಾಗಲೀ, ಅರ್ಥೈಸುವ ರೀತಿಯನ್ನಾಗಲೀ ಅಷ್ಟಾಗಿ ಮನದಟ್ಟು ಮಾಡಿಕೊಳ್ಳದಿರುವುದೇ ಆಗಿದೆ. ಆದರೆ ಬಿಡಿ, ಕಾಲ ಮಿಂಚಿಲ್ಲ. ಎಲ್ಲಕ್ಕೂ ಸರಿಯಾದ ಕಾಲವೊಂದು ಇದ್ದೇ ಇರುತ್ತೆ! ಇವತ್ತು ಈ ಬರಹದ ಮೂಲಕ ಭಾಮಿನಿ ಷಟ್ಪದಿಯ ಲಕ್ಷಣವೇನು, ಓದುವಾಗ ಅದನ್ನು ಗುರುತಿಸುವುದು ಹೇಗೆ, ಮತ್ತೆ ಮುಂದಿನ ಹೆಜ್ಜೆಯಾಗಿ ಭ…

ಕರ್ಣ ಮರಣ

Image
(ಈ ಹಿಂದೆ ಒಂದು ಸಮಸ್ಯಾಪೂರಣಕ್ಕೆಂದು ಬರೆದ ಪದ್ಯಗಳಿವು. ಕರ್ಣನ ಸಾವಿನ ಚಿತ್ರವೊಂದನ್ನು ನೋಡಿ ನೆನಪಾಗಿ, ಒಟ್ಟಿಗೆ ಹಾಕುತ್ತಿದ್ದೇನೆ)

ಕುರುಕ್ಷೇತ್ರದ ಕಾಳಗದಲಿದು
ಮರೆಯಲಾರದ ದಿನವಹುದು ಸೈ
ದುರುಳ ದುರ್ಯೋಧನನಿಗಾಸರೆಯಾದ ಕಲಿಕರ್ಣ ।
ಧರೆಗೆ ಬಿದ್ದನುಯೆನ್ನ ಮಡದಿಗೆ
ದೊರಕಿಸುವೆ ನಾ ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ||೧ ||

ತರಣಿಯಾಕಾಶದಲಿ ಕಂತು-
ತ್ತಿರಲು ಕರ್ಣನು ರಥದ ಚಕ್ರ ಕೆ-
ಸರಲಿ ಸಿಲುಕಲು ತಾನದನು ಬಿಡಿಸಲಿಕ್ಕಿಳಿದಿರಲು
ಸರಿಯ ಸಮಯವು ಕೊಲ್ಲಲೀತನ
ದುರುಳತನಕಿದು ತಕ್ಕುದೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥ ೨||

ಮರುಕವೊಂದನು ತೋರಬೇಡವು
ದುರುಳನೆಂಬುದೆ ದಿಟವು ಧರೆಯ ಕೆ-
ಸರಲಿ ಕರ್ಣನು ರಥದ ಗಾಲಿಯನೆತ್ತುತಿಹ ನೋಡೈ
ಸರಲು ಹೂಡುತಲಿವನ ಕೊಲ್ಲೆಂ-
ದಿರಲು ಹರಿ ಸರಿ ಮಾಳ್ಪೆನೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೩||

ತರಣಿ ತನಯನು ಮತ್ತೆ ಭೂಮಿಗೆ
ಮರಳಿ ಗಾಲಿಯನೆತ್ತುತಿರೆ ತಾ
ಶರವ ಹೂಡಿಡುತಲವನಾಗಲೆ ಧರಣಿಗುರುಳಿಸುತ
ತರುಣಿ ದುರುಪದಿಗಿಂದು ನೆಮ್ಮದಿ
ಬರುವುದೌ ಹರಿ ಕೇಳುಯೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೪||

ಕುರುಕ್ಷೇತ್ರದ ಭಾರಿಯುದ್ಧದ
ಮರೆಯಲಾರದ ದಿವಸವಿದು ಕೇಳ್
ತರಿದೆ ದುರ್ಯೋಧನನಿಗಾಸರೆಯಾದ ಕರ್ಣನನು ।
ಧರೆಗೆ ಬಿದ್ದನು! ಅಗ್ನಿ ಕನ್ಯೆಗೆ
ದೊರಕಿಹುದು ತುಸು ನ್ಯಾಯವೆಂದನು
ಹರುಷದಿಂದರ್ಜುನನು ಸಾರಥಿಯಾದ ಕೃಷ್ಣನಿಗೆ ॥೫||

ಮರೆಯಲಾರೆನು ನಾನು ಮಾ…