Posts

Showing posts from January, 2015

ಬದುಕಬಾರದ ಜೀವ

Image
ನಲ್ಲ ತೆರಳಿರಲೆನ್ನೆದೆಯು ಹೋದುದವನೊಡನೆ
ಸನ್ನೆಯಿಲ್ಲದೆ ಹಿಂದೆ ಹೋಯ್ತು ಮನಸು
ಲಜ್ಜೆ ತೊರೆದಿಹ  ಜೀವ! ಕೇಳಿಲ್ಲವೇ ನೀನು
ದೊಡ್ಡವರು ಹೋದಲ್ಲೆ ದಾರಿಯೆಂದು ?


ಸಂಸ್ಕೃತ ಮೂಲ ( ಧರ್ಮಕೀರ್ತಿಯ ಪದ್ಯ , 'ಕವೀಂದ್ರ ವಚನ ಸಮುಚ್ಚಯ' ದಲ್ಲಿ ಉಲ್ಲೇಖಿತ ) :

ಪ್ರಿಯೇ ಪ್ರಯಾತೇ ಹೃದಯಂ ಪ್ರಯಾತಂ
ನಿಶ್ಚೇಷ್ಟಯಾ ಚೇತನಯಾ ಸಹೈವ
ನಿರ್ಲಜ್ಜ ಹೇ ಜೀವಿತ ನ ಶ್ರುತಂ ಕಿಂ
ಮಹಾಜನೋಹೇನಗತಃ ಸ ಪಂಥಾಃ

-ಹಂಸಾನಂದಿ

ಕೊ: ತನ್ನ ನಲ್ಲನಿಂದ ದೂರವಿರಲಾರದ ಹೆಣ್ಣೊಬ್ಬಳ ಚಿತ್ರಣವಿದು. ಅವಳ ಹೃದಯವೂ, ಮನಸ್ಸೂ ತನ್ನ ನಲ್ಲನೊಡನೆಯೇ ದೇಶಾಂತರ ಹೋಗಿವೆ. ಇನ್ನು ಈ ಜೀವವಾದರೂ ಏಕೆ ಉಳಿದಿದೆಯೆಂದು, ಈ ಮೊದಲೇ ಹೋದವರ ದಾರಿಯಲ್ಲೇ, ಈ ಉಸಿರೂ ತೊರೆದು ಹೋಗದೇ ಏಕಾದರೂ ಬದುಕುಳಿದಿದ್ದೇನೆಂದು ಕೊರಗುತ್ತಿದ್ದಾಳೆ ಆ ಹೆಣ್ಣು. "ಮಹಾ ಜನೋ ಯೇನಗತಃ ಸ ಪಂಥಾಃ" - ದೊಡ್ಡವರು ಹೋದದ್ದೇ ದಾರಿ ಅನ್ನುವುದೊಂದು ನಾಣ್ಣುಡಿ.

ಕೊ.ಕೊ: ಅನುವಾದವು (ಪಂಚಮಾತ್ರಾ) ಚೌಪದಿಯ ಧಾಟಿಯಲ್ಲಿದೆ. ಆದರೆ ಪ್ರಾಸವಿಟ್ಟಿಲ್ಲ. ಅದರ ಬದಲಾಗಿ ಪ್ರಾಸವಿರಬೇಕಾದ ಕಡೆ (ಬೇರೆಬೇರೆ) ಒತ್ತಕ್ಷರಗಳಿವೆ.

ಕೊ.ಕೊ: ಹಿಂದೆ  ವ್ಯಾಪಾರಕ್ಕೆಂದು ಹೋದವರು ತಿಂಗಳುಗಟ್ಟೆ ಮರಳಿ ಬರುತ್ತಿರಲಿಲ್ಲ. ಹಾಗಾಗಿ, ಈ ರೀತಿಯ ಅಗಲಿಕೆ ಸಾಮಾನ್ಯವಾಗಿರುತ್ತಿತ್ತು. ಅಮರುಕ, ಭರ್ತೃಹರಿ, ಗಾಹಾಸತ್ತಸಯಿ ಮೊದಲಾದ ಪದ್ಯಗಳಲ್ಲಿ ಇದರ ಕುರುಹನ್ನು ನೋಡಬಹುದು. ಸಿಂಧೂ ಸರಸ್ವತೀ ನದಿಯ ನಾಗರಿಕತೆಯ ಸಮಯದಿಂದಲೇ, ನಮ್ಮದ…

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ಎರಡು

Image
(ಮೊದಲ ಭಾಗದಿಂದ ಮುಂದುವರೆದಿದೆ)

ಮೂರು ದಿನದಿಂದ ಅಣ್ಣ ಹೇಳಿದ ವಿಚಾರ ಪುಟಾಣೀಗೆ ಕೊರೀತಾನೇ ಇತ್ತು. ಅಣ್ಣ ಬರೆದ ಹಾಗೇ ತಾನೂ ಚಿತ್ರಗಳನ್ನ ಬರೆದು ಬರೆದು ನೋಡ್ತು. ಆದ್ರೆ ಯಾಕೋ ಬಗೆ ಹರೀಲೇ ಇಲ್ಲ. ಉತ್ತರಕ್ಕೆ ಹೋಗ್ತಾ ಹೋಗ್ತಾ ಉತ್ತರ ಧ್ರುವ ಸಿಕ್ಕತ್ತೆ. ಅಲ್ಲಿ ನಮ್ಮ ದಾಯಾದಿಗಳಿದಾರಂತೆ. ಅಲ್ಲಿ ತುಂಬ ಚಳಿಯಂತೆ ಅನ್ನೋ ವಿಷಯ ಮಾತ್ರ ಮನದಟ್ಟಾಗಿತ್ತು. ಇವತ್ತು ಕೇಳಿ ಹೇಗಾದ್ರೂ ತಿಳ್ಕೊಳ್ಲೇ ಬೇಕು ಅಂತ ಅಣ್ಣ ಅಣ್ಣನ್ನ ಇವತ್ತು ಮತ್ತೆ ಕೇಳ್ತು.

ಸರಿ. ಅಪ್ಪ ಕರಡಿ ಒಂದು ಚಿತ್ರ ಹಾಕಿ ತೋರಿಸ್ತು ಮೊದ್ಲಿಗೆ.


"ನೋಡು ಪುಟ್ಟಾ, ನಾವು ಕೂತ್ಕೊಂಡಾಗ, ನಮಗೆ ಆಕಾಶ ಒಂದು ಕವಿಚಿದ ಬಾಂಡಲೆ ಹಾಗೆ ಕಾಣತ್ತೆ. ಮತ್ತೆ ಅವತ್ತು ಬೆಟ್ಟದ ಮೇಲಿಂದ ನೋಡಿದಾಗ ಆಕಾಶ ಭೂಮಿ ಸೇರೋ ಜಾಗ ನೋಡಿದ್ದು ನೆನಪಿದೆಯಾ? ಈಗ ನೋಡು, ಸೀಗೇ ಗುಡ್ದಲ್ಲಿ, ಅಥವಾ ಮಾಲೇಕಲ್ಲಿನಲ್ಲಿ ಕಾಣೋ ದಿಕ್ಕುಗಳನ್ನು ಹೀಗೆ ತೋರ್ಸಿದೀನಿ ಚಿತ್ರದಲ್ಲಿ. ಗೊತ್ತಾಯ್ತಾ?" ಅಂತು ಅಪ್ಪ.

"ಓಹೋ, ಧ್ರುವ ನಕ್ಷತ್ರದ ಕಡೆಗೆ ಹೋದರೆ ಉತ್ತರ. ಅದಕ್ಕೆ ಎದುರುಗಡೆ ಹೋದರೆ ದಕ್ಷಿಣ. ಹಾಗೇ ದಕ್ಷಿಣದ ಕಡೆಗೆ ನಾನು ನೋಡ್ತಾ ಕೂತಿರೋ ಹಾಗೆ ಬರ್ದಿದೀರಾ ಅಲ್ವ ಅಣ್ಣ ಚಿತ್ರನಾ? ಆಗ ನನ್ ಬಲ್ಗೈ ಪಶ್ಚಿಮ, ಎಡಗೈ ಪೂರ್ವ" ಅಂತು ಪುಟಾಣಿ.

"ಸರಿಯಾಗಿ ಹೇಳ್ದೆ ಪುಟ್ಟಾ. ಆಮೇಲೆ, ಇನ್ನೊಂದು ವಿಷ್ಯ ಗಮನಿಸು. ಇದು ನಮ್ಮೂರು ಸೀಗೇಗುಡ್ಡದಿಂದ ಆಗಲಿ, ಅಥವಾ ಮಾಲೇಕಲ್ಲಿಂದ ಆಗಲಿ, ಅಥ…

ಸೀಗೇಗುಡ್ಡದಲ್ಲೊಂದು ಕರಡಿ ಸಂಸಾರ - ಭಾಗ ೧

Image
(ಇದು ಆರೇಳು ವರ್ಷಗಳ ಹಿಂದೆ ಬರೆದಿದ್ದ ಒಂದು ಬರಹ - ಇಲ್ಲಿ ಹಾಕಿರಲಿಲ್ಲವಾದ್ದರಿಂದ ಮತ್ತೆ ಹಾಕುತ್ತಿದ್ದೇನೆ)

ಒಂದಾನೊಂದು ಕಾಲದಲ್ಲಿ ಸೀಗೆ ಗುಡ್ಡದ ತಪ್ಪಲಲ್ಲಿ ಒಂದು ಕರಡಿ ಸಂಸಾರ ವಾಸವಾಗಿತ್ತು. ಅಮ್ಮ, ಅಪ್ಪ ಮತ್ತೆ ಪುಟಾಣಿ. ಬೆಟ್ಟದ ಮೇಲೆ ಕುರುಚಲು ಕಾಡಿದ್ದರಿಂದ ಅವರ ಸಂಸಾರಕ್ಕೆ ಹಲಸಿನ ಹಣ್ಣಿಗೂ, ಜೇನುತುಪ್ಪಕ್ಕೂ ಯಾವತ್ತೂ ಕೊರತೆ ಆಗಿರ್ಲಿಲ್ಲ. ಸುತ್ತ ಮುತ್ತ ಹಳ್ಳೀ ಜನರೂ ಕೂಡ ಸೀಗೆ ಗುಡ್ಡದಲ್ಲಿ ಕರಡಿ ಸಂಸಾರ ಇರೋದು ಗೊತ್ತಿದ್ರಿಂದ ಹೆಚ್ಚಾಗಿ ಯಾರೂ ಬೆಟ್ಟದ ಮೇಲೇ ಬರೋದಾಗ್ಲಿ, ಕರಡಿಗಳಿಗೆ ತೊಂದ್ರೆ ಮಾಡೋದಾಗ್ಲಿ ಮಾಡ್ತಿರ್ಲಿಲ್ಲ.
ಪುಟಾಣಿ ಕರಡಿ ಇದೆಯಲ್ಲ, ಅದು ಬಹಳ ಚೇಷ್ಟೆ. ನಿಂತ ಕಡೆ ಕಾಲು ನಿಲ್ಲೋದಿಲ್ಲ. ಒಂದು ದಿನ ಹಾಡುಹಗಲೇ ಅಮ್ಮನ ಕಣ್ಣು ತಪ್ಪಿಸಿ ಗುಡ್ಡದ ಕೆಳಗಿರೋ ಊರಿಗೆ ಹೋಗಿಬಿಟ್ಟಿದೆ! ನಟ್ಟ ನಡು ಮಧ್ಯಾಹ್ನ. ಎಲ್ಲೋ ಮಕ್ಕಳು ಹಾಡು ಹೇಳೋದು ಕೇಳಿ ಹೋಗಿ ನೋಡತ್ತೆ, ಒಂದು ಪುಟಾಣಿ ಗುಡಿಯೊಳಗೆ ಯಾರೋ ಮಕ್ಕಳಿಗೆ ಏನೋ ಹೇಳಿಕೊಡ್ತಿದಾರೆ. ಪುಟಾಣಿ ಅಲ್ಲೇ ಕಿಟಕಿ ಹತ್ರ ಕಿವಿಇಟ್ಟು ಕೇಳತ್ತೆ. ಮೂಡಲ - ಪಡುವಲ - ಬಡಗಲ - ತೆಂಕಲ ಇವು ನಾಕು ದಿಕ್ಕುಗಳು. ಇವಕ್ಕೇ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತಲೂ ಅಂತಾರೆ ಅಂತ ಪೇಟ ಕಟ್ಟಿಕೊಂಡವರೊಬ್ರು ಹೇಳ್ತಾ ಇದ್ದಿದ್ದನ್ನ,  ಮಕ್ಕಳೂ ಅದೇ ಮಾತನ್ನೆ ತಿರುಗಿ ತಿರುಗಿ ಹೇಳ್ತಿದ್ದು ಕೇಳಿಸ್ತು. ಅಷ್ಟರಲ್ಲೇ, ಪೇಟದವರು, ಹೋಗಿ ಮಕ್ಳಾ , ಇನ್ನು ಮನೇಗೆ ಹೋಗಿ ಊಟ ಮಾಡೀ ಅಂತ ಇ…