Posts

Showing posts from January, 2016

ಸಂಕೇತಿ ನುಡಿಯ ವೈಶಿಷ್ಟ್ಯಗಳು ಮತ್ತೆ ಅದರ ಮೇಲೆ ಕನ್ನಡದ ಪ್ರಭಾವ

Image
ಸಂಕೇತಿ ಎಂಬ ಹೆಸರಿನಿಂದ ತಮ್ಮನ್ನು ಕರೆದುಕೊಳ್ಳುವ, ಸಂಕೇತಿ ಎಂಬ ತಮಿಳಿನ ಉಪಭಾಷೆಯೊಂದನ್ನು ನುಡಿಯುವ ಸಮುದಾಯವೊಂದು ದಕ್ಷಿಣ ಕರ್ನಾಟಕದಲ್ಲಿ ಸುಪರಿಚಿತರೇ ಆಗಿದ್ದಾರೆ. ಈ ಸಮುದಾಯವು ಸುಮಾರು ಒಂದು ಸಾವಿರ ವರ್ಷಗಳಿಂದ ಕರ್ನಾಟಕದಲ್ಲಿ ನೆಲೆಸಿದ್ದರೂ, ತಮ್ಮ ಹೊರಗಿನ ಎಲ್ಲ ವ್ಯವಹಾರಗಳಿಗೂ ಕನ್ನಡವನ್ನೇ ಆಶ್ರಯಿಸಿದ್ದರೂ, ಎಲ್ಲ ಓದು ಬರವಣಿಗೆಗೂ ಕನ್ನಡವನ್ನೇ ಬಳಸುತ್ತಾ ಬಂದಿದ್ದರೂ ಮನೆಮಾತಾಗಿ ಸಂಕೇತಿಯನ್ನು ಉಳಿಸಿಕೊಂಡು ಬಂದಿರುವುದು ಗಮನಾರ್ಹವಾದ ವಿಚಾರ. ಕರ್ನಾಟಕಕ್ಕೆ ವಲಸೆ ಬಂದ  ಮೊದಲ ತಮಿಳು ಭಾಷಿಕ ಸಮುದಾಯವಾಗಿ ಈ ಸಂಕೇತಿಗಳನ್ನು ಗುರುತಿಸಬಹುದು.
೧೦೮೭ರ ವಿಕ್ರಮಾದಿತ್ಯನ ನೀಲಗುಂದ ಶಾಸನವು ತಮಿಳು ದೇಶದಿಂದ ಬಂದ ಒಂದು ಗುಂಪಿಗೆ ಆಶ್ರಯ ನೀಡಿದ ಬಗ್ಗೆ ತಿಳಿಸುತ್ತದೆಂದೂ, ಇವರೇ ಕರ್ನಾಟಕಕ್ಕೆ ಬಂದ ಮೊದಲ ಸಂಕೇತಿ ವಲಸಿಗರೆಂದೂ ಸಂಶೋಧಕ ಶ್ರೀ ಪ್ರಣತಾರ್ತಿಹರನ್ ತಮ್ಮ ಸಂಶೋಧನೆಗಳಿಂದ ತೋರಿಸಿಕೊಟ್ಟಿದ್ದಾರೆ. ಇವರಲ್ಲೇ ಕೆಲವರು ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾದ ಹೆಬ್ಬಾರ ಅಯ್ಯಂಗಾರರೆಂದೂ ಅವರ ವಾದ. ಅಂದರೆ ಸುಮಾರು ಚಾಲುಕ್ಯ ಹೊಯ್ಸಳರ ಕಾಲದಲ್ಲೇ ಸಂಕೇತಿಗಳು ಕರ್ನಾಟಕಕ್ಕೆ ಬಂದಿದ್ದಾರೆ.  ಇಂದಿನ ದಕ್ಷಿಣ ತಮಿಳುನಾಡು ಕೇರಳ ಗಡಿ ಭಾಗವಾದ ಸೆಂಗೋಟ್ಟೈ ನಿಂದ ಬಂದಿದ್ದ ಇವರನ್ನು ಸಂಕೇತಿ ಎಂದು ಕರೆಯಲಾಯಿತೆಂದೂ, ಏನೋ ಸಂಕೇತವನ್ನಿಟ್ಟುಕೊಂಡು ವಲಸೆಬಂದಿದ್ದರಿಂದ ಇವರು ಸಂಕೇತಿಗಳೆಂದೂ, ಇವರು ವಾಸ ಮಾಡುತ್ತಿದ್ದ ಹಳ್ಳಿಗಳಿಗೆ ಸಂ…

ಸಂಸ್ಕೃತದ ಸುತ್ತ ತಪ್ಪು ಗ್ರಹಿಕೆಯ ಹುತ್ತ

Image
ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.


ಚೇತನಾ ಅವರು ಸೂಫಿ ತತ್ತ್ವಗಳನ್ನು ಚೆನ್ನಾಗಿ ಓದಿಕೊಂಡಿರುವುದರಿಂದ, ಅದರ ಉಲ್ಲೇಖದೊಂದಿಗೆ ತಮ್ಮ ಬರಹವನ್ನು ಆರಂಭಿಸುತ್ತಾರೆ. ನನಗೆ ಸೂಫಿ ತತ್ತ್ವಗಳ ಬಗ್ಗೆ ಎಳ್ಳಷ್ಟೂ ಗೊತ್ತಿಲ್ಲದಿರುವುದರಿಂದ ಕೇವಲ ಆ ಭಾಗದ ಕೊನೆಯ ಎರಡು ಸಾಲುಗಳ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ. ಈ ಇಡೀ ಬರಹದಲ್ಲಿ,  ಚೇತನಾ ಅವರ ಬರಹದ ಸಾಲುಗಳನ್ನು ಕೆಂಪು ಬಣ್ಣದಲ್ಲಿ ತೋರಿಸಿದ್ದೇನೆ:
ಚೇತನಾ ಹೀಗನ್ನುತ್ತಾರೆ:
"ಚಿಕ್ಕ ಮಗು ತನ್ನದೇ ಭಾಷೆಯಲ್ಲಿ ಎಂಥದೋ ಹೇಳತ್ತೆ. ತಾಯಿ ಹೃದಯದ ಯಾರಾದರೂ ಅದನ್ನ ಮಗುವಿನ ಭಾವದಲ್ಲೇ ಗ್ರಹಿಸಿ ಸ್ಪಂದಿಸ್ತಾರೆ. ಬೀದಿ ನಾಯಿ ಬೊಗಳುವಾಗ ಅದರ ಏರಿಳಿತ ಗ್ರಹಿಸಿಯೇ ಬರುತ್ತಿರುವವರು ಪರಿಚಿತರೋ ಅಪರಿಚಿತರೋ ಅನ್ನೋದು ತಿಳಿದುಹೋಗುತ್ತೆ. ಎಂತೆಂಥ ವ್ಯವಹಾರಗಳೆಲ್ಲ ಬರೀ ಕಣ್ಣ ಕದಲುವಿಕೆಗಳಲ್ಲಿ, ಗಂಟಲ ಹೊರಳಿನಲ್ಲಿ, ಆಂಗಿಕ ಚಲನೆಯಲ್ಲಿ ನಿರ್ಧಾರವಾಗಿ ನಡೆದುಹೋಗ್ತವೆ. ಹೀಗಿರುವಾಗಹೀಗೆಲ್ಲ ಇರುವಾಗ ಕೆಲವರ ತರ್ಕ ನಗು ತರಿಸುತ್ತೆ. ಅದು ಹೇಗೆ ಜ್ಞಾನವನ್ನ ಒಂದು ಭಾಷೆಗೆ ಕಟ್ಟಿಹಾಕುತ್ತಾರೆ? "

ನಿಜವೇ. ಮಗುವಿನ ಮಾತು ತಾಯಿಗೇ ಆಡದಿರುವ ಪದಗಳಲ್ಲೇ ಅರ್ಥವಾಗುತ್ತೆ. ಆದರೆ ಅದರ ವ್ಯಾಪ್ತಿ ಎಷ್ಟು? ಅದರಲ್ಲಿ…